ಕಬ್ಬಡ್ಡಿ : ಕಬ್ಬಡ್ಡಿ ಈ ನೆಲದ ಮೂಲ ಕ್ರೀಡೆ. ನಮ್ಮ ಸಾಂಸ್ಕೃತಿಕ ಪರಂಪರೆಯ ಹಿನ್ನೆಲೆ ಇರುವ ಕ್ರೀಡೆ. ದೈಹಿಕ ಸಾಮಥರ್ಯ್‌ದ ಜೊತೆ ಕೌಶಲ್ಯಪುರ್ಣವೂ ಹೌದು. ಹಳ್ಳಿಗಳಲ್ಲದೇ ಪಟ್ಟಣಗಳಲ್ಲೂ ಇದು ಜನಪ್ರಿಯ ಆಟ. ಹಿಂದೆ ಇದು ಹೆಚ್ಚಾಗಿ ಯುವಕರು ಮತ್ತು ಬಾಲಕರು ಮಾತ್ರ ಆಡುವ ಆಟವಾಗಿತ್ತು. ಆದರೆ ಈ ಆಟದ ಪ್ರಾಮುಖ್ಯವೂ ನಿಯಮಗಳೂ ಬದಲಾದಂತೆ ಮಹಿಳೆಯರೂ ಆಡುವಂತಾಗಿ ಇವರೂ ಪುರುಷರಂತೆಯೇ ಚಾಕಚಕ್ಯತೆಯಿಂದ ಆಡುವ ಮಟ್ಟಿಗೆ ಆಟ ಬೆಳೆದಿದೆ. 

ಈ ಆಟವನ್ನು ಕೆಲವು ಕಡೆ ಹುತುತು ಎಂದು, ಮತ್ತೆ ಕೆಲವು ಕಡೆ ಚಡುಗುಡು ಎಂದು, ಕೆಲವು ಕಡೆ ಕಬಡ್ಡಿ ಎಂದು ಕರೆಯಲಾಗುತ್ತದೆ. ಕಬಡ್ಡಿಗೆ ಯಾವ ಸಲಕರಣೆಯೂ ಬೇಕಾಗಿಲ್ಲದಿರುವುದರಿಂದ ಇದನ್ನು ಸುಲಭವಾಗಿ ಎಲ್ಲ ಕಡೆಯೂ ಆಡಬಹುದು. ಈಗ ಇದೊಂದು ರಾಷ್ಟ್ರೀಯ ಆಟ. ರಾಷ್ಟ್ರೀಯ ಚಾಂಪಿಯನ್ಷಿಪ್ಗಳಲ್ಲಿ ರಾಜ್ಯ ತಂಡಗಳು ಆಡುತ್ತವೆ. ರಾಜ್ಯ ಮಟ್ಟದಲ್ಲಿ ನಡೆಯುವ ಟೂರ್ನಿಗ¼ಲ್ಲಿ ಖಾಸಗಿ ಕ್ಲಬ್ಗಳು ಆಡುತ್ತವೆ. 
ಮಟ್ಟಸವಾದ, ಕೆಮ್ಮಣ್ಣು ಮತ್ತು ಮರದ ಹೊಟ್ಟು ಮಿಶ್ರಿತವಾದ ಮೃದುವಾದ ಮೈದಾನ ಈ ಆಟಕ್ಕೆ ಅವಶ್ಯ. ಆಟದ ಮೈದಾನ ಪುರುಷರು ಮತ್ತು ಬಾಲಕರಿಗೆ 12.50 ಮೀ. ಉದ್ದ 10 ಮೀ. ಅಗಲ ಇರಬೇಕು. ಮಹಿಳೆಯರು, ಬಾಲಕಿಯರಿಗೆ 11 ಮೀ. ಉದ್ದ 8 ಮೀ ಅಗಲ ಇರಬೇಕು. ಉದ್ದವನ್ನು ಸಮವಾಗಿ ಎರಡಾಗಿ ವಿಭಾಗಿಸಬೇಕು. ಎರಡೂ ಅಂಕಣಗಳಲ್ಲಿ ಮಧ್ಯಗೆರೆಯಿಂದ ಅಡ್ಡಗೆರೆಯನ್ನು (ಬಾಕ್ಲೈನ್) ಸಮಾನಾಂತರವಾಗಿ 3.75 ಮೀ ದೂರದಲ್ಲಿ, ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಎಳೆಯಬೇಕು. ಮಹಿಳೆಯರು, ಜೂನಿಯರ್ ಬಾಲಕಿಯರು, ಬಾಲಕರ ಮೈದಾನಗಳಲ್ಲಿ 3 ಮೀ ಅಂತರದಲ್ಲಿ ಅಡ್ಡಗೆರೆ ಎಳೆಯಬೇಕು. ಅಂಕಣದ ಎಲ್ಲ ಗೆರೆಗಳೂ ಗರಿಷ್ಠ 5 ಸೆಂಮೀ ದಪ್ಪ ಇರಬೇಕು ಮತ್ತು ಅಂಕಣದ ಭಾಗವಾಗಿರಬೇಕು.

ಒಂದು ತಂಡದಲ್ಲಿ 12 ಮಂದಿ ಆಟಗಾರರಿರುತ್ತಾರೆ. ಇವರಲ್ಲಿ ಆಟಕ್ಕಿಳಿಯುವವರು 7 ಮಂದಿ ಮಾತ್ರ. ಉಳಿದವರು ಬದಲಿ ಆಟಗಾರರಾಗಿರುತ್ತಾರೆ. ಮುಖ್ಯ ತೀರ್ಪುಗಾರರ ಅಪ್ಪಣೆ ಪಡೆದು ಆಟಗಾರರನ್ನು ಬದಲಿಸಬಹುದು. ಮುಖ್ಯ ತೀರ್ಪುಗಾರ ಆಟ ಆರಂಭಿಸಲು ನಾಣ್ಯ ಚಿಮ್ಮಿಸುತ್ತಾನೆ. ಟಾಸ್ ಗೆದ್ದ ತಂಡದ ನಾಯಕ ದಾಳಿ ಆರಂಭಿಸುವ ಅಥವಾ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾನೆ. ಆಟದಲ್ಲಿ ಮಾನ್ಯತೆ ನೀಡಲಾಗಿರುವ ಶಬ್ದ ‘ಕಬಡ್ಡಿ’ಯನ್ನು ಸ್ಪಷ್ಟವಾಗಿ, ತಡೆಯಿಲ್ಲದೇ ಓತಪ್ರೋತವಾಗಿ ಒಂದೇ ಉಸಿರಿನಲ್ಲಿ ಹೇಳುವುದಕ್ಕೆ ‘ಕ್ಯಾಂಟ್’ ಎನ್ನಲಾಗುತ್ತದೆ. ದಾಳಿಕಾರನಿಗೆ ರೈಡರ್ ಎಂದು ಕರೆಯಲಾಗುತ್ತದೆ. ದಾಳಿಗಾರ ನಿಯಮಗಳಿಗನುಸಾರವಾಗಿ ಎದುರಾಳಿ ದೇಹದ ಯಾವುದೇ ಭಾಗವನ್ನು ಅಥವಾ ಬಟ್ಟೆಯನ್ನು ಮುಟ್ಟಿ, ಸುರಕ್ಷಿತವಾಗಿ ತನ್ನ ಅಂಕಣ ತಲುಪಿದಾಗ ಎದುರಾಳಿ ಔಟ್. ಎದುರಾಳಿಗಳು ದಾಳಿಕಾರನನ್ನು ಹಿಡಿದು, ಆತ ಕ್ಯಾಂಟ್ ಕಳೆದುಕೊಳ್ಳುವ ವರೆಗೆ ತನ್ನ ಅಂಕಣಕ್ಕೆ ಮರಳದಂತೆ ನೋಡಿಕೊಂಡಾಗ ದಾಳಿಕಾರ ಔಟ್. ದಾಳಿಕಾರ ವಾಪಸ್ಸಾಗುವಾಗ, ಆತನನ್ನು ಔಟ್ ಮಾಡಲು ಎದುರಾಳಿ ಕ್ಯಾಂಟ್ನೊಂದಿಗೆ ಬೆನ್ನಟ್ಟಿದಾಗ ಅದಕ್ಕೆ ‘ಪಸೂರ್ಯ್‌ಟ್’ ಎನ್ನಲಾಗುತ್ತದೆ. ಎರಡೂ ತಂಡಗಳು ಸರದಿಯಂತೆ ದಾಳಿ ನಡೆಸುತ್ತವೆ. ಒಬ್ಬ ಆಟಗಾರ ಔಟಾದಾಗ ಎದುರಾಳಿಗೆ ಒಂದು ಅಂಕ ದೊರೆಯುತ್ತದೆ.

ಪಂದ್ಯದ ಅವಧಿ: ಪುರುಷರು ಮತ್ತು ಬಾಲಕರಿಗೆ ಪುರ್ವಾರ್ಧ ಮತ್ತು ಉತ್ತರಾರ್ಧದಲ್ಲಿ ತಲಾ 20 ನಿಮಿಷಗಳು. ಮಹಿಳೆಯರು, ಬಾಲಕಿಯರು ಮತ್ತು ಸಬ್ಜೂನಿಯರ್ ವಿಭಾಗದವರಿಗೆ ತಲಾ 15 ನಿಮಿಷಗಳು. ಮಧ್ಯೆ ಐದು ನಿಮಿಷ ವಿರಾಮ. ವಿರಾಮದ ನಂತರ ತಂಡಗಳಿಂದ ಪಕ್ಕ ಬದಲಾವಣೆ. 

ಪಂದ್ಯವೊಂದಕ್ಕೆ ಒಬ್ಬ ತೀರ್ಪುಗಾರ (ರೆಫರಿ), ಇಬ್ಬರು ನಿರ್ಣಾಯಕರು (ಅಂಪೈರ್), ಒಬ್ಬ ಅಂಕ ಎಣಿಕೆಗಾರ (ಸ್ಕೋರರ್) ಮತ್ತು ಇಬ್ಬರು ಸಹಾಯಕ ಎಣಿಕೆಗಾರರು ಇರಬೇಕು. ತೀರ್ಪುಗಾರರ ನಿರ್ಣಯವೇ ಅಂತಿಮ.
ಕಬಡ್ಡಿ ಭಾರತದಲ್ಲಿ ಜನಪ್ರಿಯ ಆಟವಾದರೂ ಏಷ್ಯನ್ ಕ್ರೀಡೆUಳಲ್ಲಿ ಸ್ಥಾನ ಪಡೆದಿದ್ದರೂ ವಿಶ್ವ ಕ್ರೀಡಾರಂಗದ ಮುಖ್ಯವಾಹಿನಿಯಿಂದ ಇನ್ನೂ ದೂರವೇ ಇದೆ. 1982 ಹಾಗೂ 1986 ರ ಏಷ್ಯನ್ ಕ್ರೀಡೆಗಳಲ್ಲಿ ಕಬಡ್ಡಿಯನ್ನು ಪ್ರದರ್ಶನ ಕ್ರೀಡೆಯಾಗಿ ಆಡಿಸಲಾಯಿತಾದರೂ ಅಧಿಕೃತ ಮನ್ನಣೆ ಸಿಕ್ಕಿದ್ದು, 1990ರ ಬೀಜಿಂಗ್ ಏಷ್ಯನ್ ಕ್ರೀಡೆUಳಲ್ಲಿ. ಏಷ್ಯನ್ ಕ್ರೀಡೆಗಳ ಕಬಡ್ಡಿಯಲ್ಲಿ ಭಾರತವೇ ಚಿನ್ನದ ಒಡೆಯ. 1990 ರಿಂದ ಇಲ್ಲಿಯ ವರೆಗೆ ನಡೆದಿರುವ ನಾಲ್ಕೂ ಏಷ್ಯನ್ ಕ್ರೀಡೆಗಳಲ್ಲಿ ಭಾರತವೇ ಚಿನ್ನದ ಪದಕ ಗೆದ್ದಿದೆ. ಭಾರತ-ಪಾಕಿಸ್ತಾನ-ಶ್ರೀಲಂಕ-ಬಾಂಗ್ಲಾದೇಶ ತಂಡಗಳ ನಡುವೆಯೇ ಹೆಚ್ಚಿನ ಪೈಪೋಟಿ. ಚೀನ, ಜಪಾನ್ ದೇಶಗಳು ಆಡುತ್ತವೆಯಾದರೂ ಅವುಗಳ ಆಟದ ಮಟ್ಟ ಇನ್ನೂ ಏರಿಲ್ಲ. ಸದ್ಯಕ್ಕಂತೂ ಕಬಡ್ಡಿ ಆಟಕ್ಕೆ ಒಲಿಂಪಿಕ್ ಕ್ರೀಡೆಗಳಲ್ಲಿ ಅವಕಾಶ ಸಿಗುವ ಸಾಧ್ಯತೆಗಳು ಕಡಿಮೆ. 

ಕರ್ನಾಟಕದ ಸಿ ಹೊನ್ನಪ್ಪ ಮತ್ತು ಬಿ ಸಿ ರಮೇಶ್ ‘ಅರ್ಜುನ ಪ್ರಶಸ್ತಿ’ಗೆ ಪಾತ್ರರಾಗಿದ್ದಾರೆ.

ಅರ್ಜುನ ಪ್ರಶಸ್ತಿಗೆ ಪಾತ್ರರಾಗಿರುವ ಆಟಗಾರರು ಇಂತಿದ್ದಾರೆ: 
1.	ಸದಾನಂದ ಮಹದೇವ ಶೆಟ್ಟಿ (ಮುಂಬೈ): 1971-72.
2.	ಭೋಲಾನಾಥ್ (ಮುಂಬೈ): 1972-73.
3.	ಶಕುಂತಲಾ ಖಟಾವಕರ್ (ಮುಂಬೈ): 1978-79.
4.	ಶಾಂತಾರಾಮ ಜಾಧವ (ಮುಂಬೈ): 1979-80.
5.	ಮೋನಿಕಾನಾಥ್ ಬನ್ನಿ (ಕೋಲ್ಕತ್ತ): 1980-81.
6.	ಮಾಯಾ ಕಾಶೀನಾಥ್ (ಮುಂಬೈ): 1982-83.
7.	ರಮಾ ಸರ್ಕಾರ್ (ರೈಲ್ವೇಸ್, ಪಶ್ಚಿಮ ಬಂಗಾಳ): 1985-86.
8.	ಹರ್ದೀಪ್ ಸಿಂಗ್ (ಸರ್ವಿಸಸ್): 1989-90.
9.	ಎಸ್. ರಾಜರತ್ನಂ (ತಮಿಳುನಾಡು): 1993-94.
10.	ಅಶೋಕ್ ಶಿಂಧೆ (ಮುಂಬೈ): 1994-95.
11.	ಪಿ. ಗಣೇಶನ್ (ತಮಿಳುನಾಡು): 1994-95.
12.	ಶ್ರೀರಾಮ ಭಾವಸಾರ (ಮಹಾರಾಷ್ಟ್ರ): 1995-96.
13.	ನೀತಾ ಮೋಳೇಶ್ವರ ದಾಂಡೆ (ರೈಲ್ವೇಸ್): 1995-96.
14.	ಹರ್ದೀಪ್ ಸಿಂಗ್ (ರೈಲ್ವೇಸ್): 1996-97.
15.	ಹಸನ್ಕುಮಾರ್ (ಸರ್ವಿಸಸ್): 1997-98.
16.	ಬಿಸ್ವಜಿತ್ ಪಾಲಿಕತ್ (ರೈಲ್ವೇಸ್): 1997-98.
17.	ಬಲ್ವಿಂದರ್ ಸಿಂಗ್ (ಪಂಜಾಬ್): 1998-99.
18.	ತೀರ್ಥರಾಜ್ (ದೆಹಲಿ): 1998-99.
19.	ಸಿ.ಹೊನ್ನಪ್ಪ (ಕರ್ನಾಟಕ): 2000-01.
20.	ಬಿ.ಸಿ. ರಮೇಶ್ (ಕರ್ನಾಟಕ): 2001-02.
21.	ಸಂಜೀವಕುಮಾರ್ (ರೈಲ್ವೇಸ್): 2002-03.
22.	ರಾಮ್ ಮೆಹರ್ (ಸರ್ವಿಸಸ್): 2003-04.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ